ಮುಖೇಶ್‌ ಕುಮಾರ್‌ ಸಿಂಗ್‌ ನಿರ್ದೇಶನದ ‘ಕಣ್ಣಪ್ಪ’ ಪೌರಾಣಿಕ ತೆಲುಗು ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ವಿಷ್ಣು ಮಂಚು ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟರಾದ ಶಿವರಾಜಕುಮಾರ್‌, ಪ್ರಭಾಸ್, ಮೋಹನ್ ಬಾಬು, ಮೋಹನ್ ಲಾಲ್ ಸಿನಿಮಾದ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಷ್ಣು ಮಂಚು ಅವರ ‘ಕಣ್ಣಪ್ಪ’ ಪೌರಾಣಿಕ ತೆಲುಗು ಸಿನಿಮಾದ ಫಸ್ಟ್‌ಲುಕ್‌ ಫೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರವನ್ನು ಮುಖೇಶ್‌ ಕುಮಾರ್‌ ಸಿಂಗ್‌ ನಿರ್ದೇಶಿಸುತ್ತಿದ್ದಾರೆ. ಪರುಚೂರಿ ಗೋಪಾಲ ಕೃಷ್ಣ, ಈಶ್ವರ್ ರೆಡ್ಡಿ, ಜಿ ನಾಗೇಶ್ವರ ರೆಡ್ಡಿ ಮತ್ತು ತೋಟ ಪ್ರಸಾದ್ ಅವರು ಅಭಿವೃದ್ಧಿಪಡಿಸಿದ ಕಥೆಯನ್ನು ಆಧರಿಸಿ ವಿಷ್ಣು ಮಂಚು ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಫೋಸ್ಟರ್‌ನಲ್ಲಿ ವಿಷ್ಣು ಮಂಚು ಬಿಲ್ಲು ಹಿಡಿದ ಕಣ್ಣಪ್ಪನಾಗಿದ್ದು, ಹೊಳೆಯುವ ಶಿವಲಿಂಗದ ಮುಂದೆ ಬಾಣ ಬಿಡುತ್ತಿರುವುದನ್ನು ಕಾಣಬಹುದು. ನಾಸ್ತಿಕ ಹಾಗೂ ಮೂಲತಃ ಬುಡಕಟ್ಟು ಬೇಟೆಗಾರನಾದ ಕಣ್ಣಪ್ಪ ಶಿವನ ಪರಮ ಭಕ್ತನಾಗುತ್ತಾನೆ. ತನ್ನ ಒಂದು ಕಣ್ಣನ್ನು ಶಿವಲಿಂಗಕ್ಕೆಅರ್ಪಿಸಿ ತನ್ನ ಅಪಾರ ಭಕ್ತಿಯನ್ನು ತೋರಿಸುತ್ತಾನೆ. ಅವನ ಎರಡನೇ ಕಣ್ಣನ್ನು ಶಿವಲಿಂಗಕ್ಕೆ ಅರ್ಪಿಸುವ ಮೊದಲು ಶಿವನು ಪ್ರತ್ಯಕ್ಷನಾಗಿ ಕಣ್ಣಪ್ಪನಿಗೆ ವರ ನೀಡುತ್ತಾನೆ ಎಂಬ ಪ್ರತೀತಿ ಇತಿಹಾಸದಲ್ಲಿದೆ.

ಚಿತ್ರದ ಫಸ್ಟ್‌ ಲುಕ್‌ ಅನ್ನು ತಮ್ಮ X ನಲ್ಲಿ ಹಂಚಿಕೊಂಡಿರುವ ವಿಷ್ಣು ಮಂಚು ‘ಕಣ್ಣಪ್ಪನ ಜಗತ್ತಿಗೆ ಹೆಜ್ಜೆ ಹಾಕಿ. ಅಲ್ಲಿ ನಾಸ್ತಿಕ ಯೋಧನೊಬ್ಬ ಶಿವನ ಪರಮ ಭಕ್ತನಾಗುವ ಪ್ರಯಾಣಕ್ಕೆ ಜೀವ ತುಂಬಿದ ಕತೆಗೆ ಸಾಕ್ಷಿಯಾಗಿ’ ಎಂದು ಬರೆದುಕೊಂಡಿದ್ದಾರೆ. AVA Entertainment ಮತ್ತು 24 Frames Factory ಬ್ಯಾನರ್‌ ಅಡಿಯಲ್ಲಿ ನಟ ಮೋಹನ್ ಬಾಬು ಸಿನಿಮಾ ನಿರ್ಮಿಸುತ್ತಿದ್ದಾರೆ. ಪ್ರಸ್ತುತ ನ್ಯೂಜಿಲೆಂಡ್‌ನಲ್ಲಿ ಅದ್ಧೂರಿಯಾಗಿ ಚಿತ್ರೀಕರಣಗೊಳ್ಳುತ್ತಿರುವ ಸಿನಿಮಾದಲ್ಲಿ ದಕ್ಷಿಣದ ತಾರೆಗಳಾದ ಪ್ರಭಾಸ್, ಮೋಹನ್ ಬಾಬು, ಮೋಹನ್ ಲಾಲ್ ಮತ್ತು ಶಿವರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here