ಬಿಗ್‌ಬಾಸ್‌ ತೆಲುಗು 5ನೇ ಸೀಸನ್‌ ವಿಜೇತರಾಗಿ VJ ಸನ್ನಿ ಆಯ್ಕೆಯಾಗಿದ್ದಾರೆ. ನಿನ್ನೆ ರಾತ್ರಿ ನಡೆದ ವರ್ಣರಂಜಿತ ಫೈನಲ್‌ ಸಮಾರಂಭದಲ್ಲಿ ಶೋ ನಿರೂಪಕ, ನಟ ನಾಗಾರ್ಜುನ ಟ್ರೋಫಿ ಹಸ್ತಾಂತರಿಸಿದರು. ದೊಡ್ಡ ತಾರಾಬಗಳ ಕಾರ್ಯಕ್ರಮಕ್ಕೆ ಸಾಕ್ಷಿಯಾಯ್ತು.

ಬಿಗ್‌ಬಾಸ್‌ ತೆಲುಗು 5ನೇ ಸೀಸನ್‌ನಲ್ಲಿ ಮಾನಸ್‌, ಸಿರಿ ಹನುಮಂತ್‌, ಶ್ರೀರಾಮಚಂದ್ರ, ಷನ್ಮುಖ್‌ ಜಸ್ವಂತ್‌ ಮತ್ತು ಸನ್ನಿ ಫೈನಲ್‌ ಸ್ಪರ್ಧಿಗಳ ಪಟ್ಟಿಯಲ್ಲಿದ್ದರು. ಸಿರಿ ಮತ್ತು ಮಾನಸ್‌ ಕೊನೆಯ ಹಂತದಲ್ಲಿ ನಿರ್ಗಮಿಸಿದರು. VJ ಸನ್ನಿ ವಿಜೇತರಾದರೆ, ಗಾಯಕ ಶ್ರೀರಾಮಚಂದ್ರ ಮತ್ತು ಯೂಟ್ಯೂಬ್‌ ಸ್ಟಾರ್‌ ಷನ್ಮುಖ್‌ ಜಸ್ವಂತ್‌ ರನ್ನರ್‌ ಅಪ್‌ ಆದರು. ಬಿಗ್‌ಬಾಸ್‌ ಗೆದ್ದ ಸನ್ನಿ ಟ್ರೋಫಿ ಜೊತೆ ಐವತ್ತು ಲಕ್ಷ ರೂಪಾಯಿಗಳನ್ನು ತಮ್ಮದಾಗಿಸಿಕೊಂಡರು. ಫೈನಲ್‌ ಸಮಾರಂಭ ಅದ್ಧೂರಿಯಾಗಿ ನಡೆಯಿತು. ನಟಿಯರಾದ ಶ್ರಿಯಾ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾಗಳ ಹಾಡುಗಳಿಗೆ ಹೆಜ್ಜೆ ಹಾಕಿದರು. ‘ಪುಷ್ಪ’ ಚಿತ್ರತಂಡದಿಂದ ದೇವಿಶ್ರೀ ಪ್ರಸಾದ್‌ ಮತ್ತು ಸುಕುಮಾರ್‌ ಕೂಡ ಹಾಜರಿದ್ದರು. ‘RRR’ ಸಿನಿಮಾ ತಂಡದಿಂದ ನಿರ್ದೇಶಕ ರಾಜಮೌಳಿ, ಅಲಿಯಾ ಭಟ್‌ ಕೂಡ ಹಾಜರಿದ್ದುದು ವಿಶೇಷ. ದಕ್ಷಿಣ ಭಾರತದ ಸಿನಿಮಾ ತಾರೆಯರಾದ ನಾನಿ, ಸಾಯಿ ಪಲ್ಲವಿ, ಕೃತಿ ಶೆಟ್ಟಿ ಮುಂತಾದವರು ಸ್ಪರ್ಧಿಗಳೊಂದಿಗೆ ಚಿಟ್‌ಚಾಟ್‌ ನಡೆಸಿದರು. ಬಿಗ್‌ಬಾಸ್‌ ತೆಲುಗು 5ನೇ ಸೀಸನ್‌ ಸೆಪ್ಟೆಂಬರ್‌ನಲ್ಲಿ ಆರಂಭವಾಗಿತ್ತು. ಖ್ಯಾತ ನಟ ನಾಗಾರ್ಜುನ ಶೋ ನಿರೂಪಿಸಿದ್ದರು.

LEAVE A REPLY

Connect with

Please enter your comment!
Please enter your name here