‘Spencer’ ಚಿತ್ರದಲ್ಲಿ Diana Spencer ಪಾತ್ರ ನಿರ್ವಹಿಸಿರುವ Kristen Stewart ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿಯುವ ದಟ್ಟ ಸೂಚನೆಗಳಿವೆ. Michael Showalter ನಿರ್ದೇಶನದ ‘The Eyes of Tammy Faye’ ಚಿತ್ರದಲ್ಲಿನ ನೈಜ ನಟನೆಯಿಂದ Jessica Chastain ಈ ಪ್ರಶಸ್ತಿಗಾಗಿ Stewartಗೆ ತೀವ್ರ ಸ್ಪರ್ಧೆಯೊಡ್ಡಿದ್ದಾರೆ.

ಅಕಾಡೆಮಿ ಪ್ರಶಸ್ತಿ ಸಮಾರಂಭ ನಾಳೆ ನಡೆಯಲಿದ್ದು, ಪ್ರಶಸ್ತಿಗೆ ಯಾರು ಅರ್ಹರು? ಯಾರಿಗೆಲ್ಲಾ ಪ್ರಶಸ್ತಿ ಒಲಿಯಬಹುದು ಎನ್ನುವ ಚರ್ಚೆ ಮುನ್ನಲೆಗೆ ಬಂದಿದೆ. ಸಿನಿಪ್ರೇಮಿಗಳ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ನಟರು, ತಂತ್ರಜ್ಞರ ಬಗ್ಗೆ ಪ್ರಸ್ತಾಪಿಸಿ ಬರೆಯುತ್ತಿದ್ದಾರೆ. ಸಿನಿಪಂಡಿತರು ಕೂಡ ತಮ್ಮದೊಂದು ಪಟ್ಟಿ ಸಿದ್ಧಪಡಿಸಿದ್ದಾರೆ. ಅತ್ಯುತ್ತಮ ನಟ/ನಟಿ, ಪೋಷಕ ನಟ/ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಿನಿಮಾ ವಿಭಾಗಗಳಲ್ಲಿ ಹೆಚ್ಚು ಚರ್ಚೆಗಳು ನಡೆದಿವೆ. ವಿವಿಧ ಮೂಲಗಳ ಪ್ರಕಾರ ಪ್ರಶಸ್ತಿ ಪಡೆಯುವ ಸಾಧಕರ ಪಟ್ಟಿ ಈ ಕಳೆಗಿನಂತಿದೆ.

ನಟ | Reinaldo Marcus ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ ‘King Richard’ ಚಿತ್ರದಲ್ಲಿನ ‘Richard Williams’ ಪಾತ್ರದಲ್ಲಿ Will Smith ಈ ಬಾರಿ ಪ್ರಶಸ್ತಿ ಪಡೆಯಲಿರುವ ಫೇವರಿಟ್ ನಟ ಎನ್ನಲಾಗಿದೆ. ಈಗಾಗಲೇ ಎರಡು ಬಾರಿ ಆಸ್ಕರ್ಗೆ ನಾಮನಿರ್ದೇಶನಗೊಂಡಿದ್ದ ವಿಲ್ ಸ್ಮಿತ್, ಎರಡೂ ಬಾರಿ ಅದೃಷ್ಟದಿಂದ ವಂಚಿತರಾಗಿದ್ದರು. ವೋಟ್ ಮಾಡುವವರು ಈ ಅಂಶವನ್ನೂ ಪರಿಗಣಿಸಿದರೆ ನಿಸ್ಸಂಶಯವಾಗಿ ವಿಲ್ ಸ್ಮಿತ್ ಪ್ರಶಸ್ತಿಗೆ ಭಾಜನರಾಗಲಿದ್ದಾರೆ. “ವಿಲ್ ಸ್ಮಿತ್ ಉತ್ತಮ ನಟರೇನೋ ಹೌದು. ಆದರೆ ‘King Richard’ ಚಿತ್ರದಲ್ಲಿನ ವಿಲ್ ಸ್ಮಿತ್ ನಟನೆ ಈ ಬಾರಿಯ ನಾಮಿನೇಷನ್ಸ್ಗಳ ಪಟ್ಟಿಯಲ್ಲಿನ ಅತ್ಯುತ್ತಮ ಅಭಿನಯವೇನಲ್ಲ” ಎಂದು ಕೆಲವು ಸಿನಿಮಾ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿಯ ಗೆಲುವು ‘The Power of the Dog’ ಚಿತ್ರಕ್ಕಾಗಿ Benedict Cumberbatch ಅವರದ್ದಾಗಬೇಕು ಎನ್ನುವುದು ವಿಶ್ಲೇಷಕರ ಅಭಿಪ್ರಾಯ. Cumberbatch ವೃತ್ತಿಬದುಕಿನಲ್ಲೇ ಇದು ಶ್ರೇಷ್ಠ ಅಭಿನಯ ಎನ್ನುವ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಟಿ | ‘Spencer’ ಚಿತ್ರದಲ್ಲಿ Diana Spencer ಪಾತ್ರ ನಿರ್ವಹಿಸಿರುವ Kristen Stewart ಅವರಿಗೆ ಆಸ್ಕರ್ ಒಲಿಯುವ ದಟ್ಟ ಸೂಚನೆಗಳಿವೆ. ನೈಜ ಘಟನೆ ಆಧರಿಸಿದ ಚಿತ್ರ ಎನ್ನುವ ಕಾರಣಕ್ಕೆ ‘Spencer’ ಮತ್ತು Kristen Stewart ಹೆಚ್ಚು ಸುದ್ದಿಯಲ್ಲಿದ್ದಾರೆ. ಸಹಜವಾಗಿಯೇ ಜನಪ್ರಿಯತೆ Stewart ಕಡೆಗಿದೆ. ಈ ಪ್ರಶಸ್ತಿಗೆ ತೀವ್ರ ಪೈಪೋಟಿಯೊಡ್ಡಿರುವ ಮತ್ತೊಬ್ಬ ನಟಿ Jessica Chastain. ನಿರ್ದೇಶಕ Michael Showalter ನಿರ್ದೇಶನದ ‘The Eyes of Tammy Faye’ ಚಿತ್ರದಲ್ಲಿನ ನೈಜ ನಟನೆಯಿಂದ Jessica ಪ್ರೇಕ್ಷಕರ ಮನಗೆದ್ದಿದ್ದಾರೆ.

ಪೋಷಕ ನಟ | ‘CODA’ ಚಿತ್ರಕ್ಕಾಗಿ Troy Kotsur ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಒಲಿಯುವ ಸಾಧ್ಯತೆಗಳಿವೆ. ಈಗಾಗಲೇ ಸಾಕಷ್ಟು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ Troy Kotsur ಈ ಬಾರಿ ಆಸ್ಕರ್ ಗೌರವದೊಂದಿಗೆ ಬೀಗುವ ಅವಕಾಶಗಳು ಹೆಚ್ಚೇ ಇವೆ. Jane Campion ನಿರ್ದೇಶನದ ‘The Power of the Dog’ ಚಿತ್ರದ ನಟನೆಗಾಗಿ 25ರ ಹರೆಯದ Kodi smit-McPhee ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಸ್ಪರ್ಧೆಯೊಡ್ಡಿರುವ ಕಲಾವಿದ. ಮೆದು ಮಾತಿನ, ಸೂಕ್ಷ್ಮ ಸ್ವಭಾವದ ಟೀನೇಜ್ ಹುಡುಗನಾಗಿ ಚಿತ್ರದಲ್ಲಿ ಅವರದ್ದು ಗಮನಾರ್ಹ ಅಭಿನಯ.

ಪೋಷಕ ನಟಿ | ನಿಸ್ಸಂಶಯವಾಗಿ ನಟಿ Ariana DeBose ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಅರ್ಹ ಅಯ್ಕೆ. ಈ ವಿಭಾಗದಲ್ಲಿ ನಾಮನಿರ್ದೇಶನಗೊಂಡಿರುವ ಎಲ್ಲರೂ ಪ್ರತಿಭಾವಂತ ನಟಿಯರಾದರೂ ‘Wes Side Story’ ಚಿತ್ರದಲ್ಲಿನ DeBose ಹೆಚ್ಚು ಸ್ಕೋರ್ ಮಾಡುತ್ತಾರೆ. Steven Spielberg ನಿರ್ದೇಶನದ ಈ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿರುವ ಪಾತ್ರವೂ ಹಾಗೇ ಇದೆ. DeBose ಉತ್ತಮ ಗಾಯಕಿ ಮತ್ತು ಡ್ಯಾನ್ಸರ್ ಕೂಡ ಹೌದು. ಮತ್ತೊಂದೆಡೆ ಹಾಲಿವುಡ್ ಪ್ರೇಮಿಗಳು ಈ ಬಾರಿಯ ಅತ್ಯುತ್ತಮ ಪೋಷಕ ನಟಿ ಗೌರವ Kirsten Dunst ಅವರಿಗೆ ಒಲಿಯಲಿ ಎಂದು ಆಶಿಸುತ್ತಿದ್ದಾರೆ. Netflixನ ‘The Power of the Dog’ ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ಮೊದಲ ಬಾರಿ ಆಸ್ಕರ್ಗೆ ನಾಮನಿರ್ದೇಶನಗೊಂಡಿದ್ದಾರೆ. ಈ ಹಿಂದೆ ‘Interview with teh Vampire’, ‘The Virgin Suicied’,’Melancholia’ ಚಿತ್ರಗಳಲ್ಲಿನ ಅವರ ಪಾತ್ರಗಳು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದವು.

ನಿರ್ದೇಶನ | Netflix ನ ‘The Power of the Dog’ ಚಿತ್ರಕ್ಕಾಗಿ Jane Campion ಅವರಿಗೆ ಅತ್ಯುತ್ತಮ ನಿರ್ದೇಶನಕ್ಕಾಗಿ ಗೌರವ ಸಿಗುವ ಸಾಧ್ಯತೆಗಳಿವೆ. ಗೆಲುವು ಅವರದಾದರೆ ನಿರ್ದೇಶನಕ್ಕಾಗಿ ಅಕಾಡೆಮಿ ಪ್ರಶಸ್ತಿ ಪಡೆದ ಮೂರನೇ ಮಹಿಳೆಯಾಗುತ್ತಾರೆ ಅವರು. ಕಳೆದ ವರ್ಷ ‘Eternals’ ಚಿತ್ರಕ್ಕಾಗಿ ನಿರ್ದೇಶಕಿ Chloe Zhao ಪ್ರಶಸ್ತಿ ಪಡೆದಿದ್ದರು. ಈ ಬಾರಿ Campion ಅವರು ಪ್ರಶಸ್ತಿ ಪಡೆದರೆ ಸತತ ಎರಡನೇ ಬಾರಿ ನಿರ್ದೇಶಕಿಯೊಬ್ಬರು ಈ ವಿಭಾಗದ ಗೌರವಕ್ಕೆ ಪಾತ್ರರಾದಂತಾಗುತ್ತದೆ. ಅಚ್ಚರಿಯ ಬೆಳವಣಿಗೆಯಲ್ಲಿ ‘Drive My Car’ ಚಿತ್ರದ ನಿರ್ದೇಶನಕ್ಕಾಗಿ Ryusuke Hamaguchi ಅವರಿಗೆ ಆಸ್ಕರ್ ಒಲಿದರೂ ಒಲಿಯಬಹುದು.

ಅತ್ಯುತ್ತಮ ಸಿನಿಮಾ | Netflix ಈ ಹಿಂದೆ ನಿರ್ಮಿಸಿದ್ದ ‘Roma’, ‘The Irishman’, ‘Marriage Story’, ‘Mank’, ‘The Tral of the Chicago 7’ ಚಿತ್ರಗಳು ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ನಾಮಿನೇಟ್ ಆಗಿದ್ದವು. ಆದರೆ ಪ್ರಶಸ್ತಿ ಪಡೆಯುವಲ್ಲಿ ಈ ಚಿತ್ರಗಳಿಗೆ ಹಿನ್ನಡೆಯಾಗಿತ್ತು. ಆದರೆ ಈ ಬಾರಿ ನಾಮಿನೇಟ್ ಆಗಿರುವ Netflix ನ ‘The Power of the Dog’ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಈ ಸಿನಿಮಾ 12 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ ಎನ್ನುವುದು ವಿಶೇಷ. Apple TV+ ಸ್ಟ್ರೀಮಿಂಗ್ ಸರ್ವೀಸಸ್ ನಿರ್ಮಿಸಿರುವ ‘CODA’ ಸಿನಿಮಾಗೂ ದೊಡ್ಡ ಸಂಖ್ಯೆಯಲ್ಲಿ ವೋಟ್ಗಳು ಸಿಕ್ಕಿವೆ. ಒಂದೊಮ್ಮೆ ‘CODA’ ಗೆದ್ದರೆ ಅದು Apple TV+ಗೆ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಮೊದಲ ಗೌರವವಾಗಲಿದೆ.

LEAVE A REPLY

Connect with

Please enter your comment!
Please enter your name here