ಬಹುಭಾಷಾ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘CD’ ತೆಲುಗು ಸಿನಿಮಾ ಸೆಟ್ಟೇರಿದೆ. ಕೃಷ್ನ ಅನ್ನಂ ನಿರ್ದೇಶನದ ಸೈಕಲಾಜಿಕಲ್‌ ಥ್ರಿಲ್ಲರ್‌ ಕತೆಯಿದು.

ಈ ವರ್ಷದ ಅತಿ ದೊಡ್ಡ ಹಿಟ್‌ ಸಿನಿಮಾಗಳಲ್ಲೊಂದಾದ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮ ತಮ್ಮ ಹೊಸ ತೆಲುಗು ಸಿನಿಮಾ ಘೋಷಿಸಿದ್ದಾರೆ. ಈ ಸ್ತ್ರೀಕೇಂದ್ರಿತ ತೆಲುಗು ಚಿತ್ರದ ಶೀರ್ಷಿಕೆ ‘CD’ ಎಂದಿದೆ. CD ಅಂದರೆ Criminal or Devil ಎಂದರ್ಥ. ಈ ಚಿತ್ರದೊಂದಿಗೆ ಅದಾ ಅವರು ಟಾಲಿವುಡ್‌ಗೆ ಮರಳುತ್ತಿದ್ದಾರೆ. ಇದೊಂದು ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾಹಂದರವಾಗಿದ್ದು ಕೃಷ್ಣ ಅನ್ನಂ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. ಎಎಸ್‌ಸಿಎಂ ಪ್ರೊಡಕ್ಷನ್ಸ್‌ ಈ ಚಿತ್ರ ನಿರ್ಮಿಸುತ್ತಿದ್ದು, ಎ ಮುದ್ದುಕೃಷ್ಣ ಕತೆ ಮತ್ತು ಸಂಭಾಷಣೆ ರಚಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಫೋಟೋ ಫ್ರೇಮ್‌ನಿಂದ ಹಸ್ತಗಳು ಹೊರಗೆ ಚಾಚಿರುವಂತೆ ಕಾಣಿಸುತ್ತದೆ. ಚಿತ್ರದಲ್ಲಿ ಅದಾ ಶರ್ಮಾ ಕೆಂಪು ಉಡುಪನ್ನು ಧರಿಸಿ ವಿಭಿನ್ನ ಲುಕ್‌ ನೀಡಿದ್ದಾರೆ. ಕುತೂಹಲಕಾರಿ ಟ್ವಿಸ್ಟ್‌ಗಳು ಮತ್ತು ತಿರುವುಗಳು ಚಿತ್ರದಲ್ಲಿರಲಿವೆ ಎನ್ನುತ್ತಾರೆ ನಿರ್ದೇಶಕರು. ಚಿತ್ರೀಕರಣ ಇತ್ತೀಚೆಗಷ್ಟೇ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜಾರಿಯಲ್ಲಿವೆ.

Previous article‘ಲಕ್ಕೀ ಮ್ಯಾನ್‌’ ಟ್ರೈಲರ್‌ | ಯೋಗಿ ಬಾಬು ತಮಿಳು ಸಿನಿಮಾ ಸೆಪ್ಟೆಂಬರ್‌ 1ರಂದು
Next articleUSA ‘ಅಪ್ಪು ಸಂಜೆ’ ಕಾರ್ಯಕ್ರಮದಲ್ಲಿ ‘ಬಾನದಾರಿಯಲ್ಲಿ’ ಲಿರಿಕಲ್‌ ವಿಡಿಯೋ ಬಿಡುಗಡೆ

LEAVE A REPLY

Connect with

Please enter your comment!
Please enter your name here