UPSC ಪರೀಕ್ಷೆ, ವಿದ್ಯಾರ್ಥಿಗಳ ಪರಿಶ್ರಮದ ಸುತ್ತ ಕತೆ ಹೆಣೆದಿರುವ ’12th ಫೇಲ್‌’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನೈಜ ಘಟನೆಗಳನ್ನು ಆಧರಿಸಿ ತಯಾರಿಸಿರುವ ಸಿನಿಮಾ. ಅಕ್ಟೋಬರ್‌ 27ರಂದು ಮೂಲ ಹಿಂದಿ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ವಿಧು ವಿನೋದ್‌ ಚೋಪ್ರಾ ರಚಿಸಿ, ನಿರ್ಮಿಸಿ, ನಿರ್ದೇಶಿಸಿರುವ ’12th ಫೇಲ್‌’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. UPSC ಪರೀಕ್ಷೆಯನ್ನೇ ವಸ್ತುನಿಷ್ಠವಾಗಿಟ್ಟುಕೊಂಡಿರುವ ಈ ಚಿತ್ರವು IPS ಅಧಿಕಾರಿಗಳಾದ ಮನೋಜ್ ಕುಮಾರ್ ಶರ್ಮಾ ಮತ್ತು IRS ಅಧಿಕಾರಿ ಶ್ರದ್ಧಾ ಜೋಶಿ ಅವರ ನಿಜ ಜೀವನದ ಕಥೆಯಿಂದ ಪ್ರೇರಿತವಾಗಿದೆ. ‘Restart’ ಅಡಿಬರಹ ಹೊಂದಿರುವ ಹಾಗೂ ಭಾರತದ ಕಠಿಣ ಪರೀಕ್ಷೆಗಳಲ್ಲೊಂದಾದ UPSC ಪರೀಕ್ಷೆಯನ್ನು ಎದುರಿಸುವ ನೈಜ ಸ್ಥಳಗಳಲ್ಲಿ, ನೈಜ ವಿದ್ಯಾರ್ಥಿಗಳೊಂದಿಗೆ ಚಿತ್ರವನ್ನು ಚಿತ್ರೀಕರಿಸಲಾಗಿದೆ. ದೆಹಲಿಯ ಮುಖರ್ಜಿ ನಗರದ ಜನ ಜಂಗುಳಿಯಿಂದ ಕೂಡಿರುವ ವಾತಾವರಣದಿಂದ ಟೀಸರ್‌ ಆರಂಭವಾಗುತ್ತದೆ.

ನಂತರ ‘ಸಾವಿರಾರು ಜನ ಇಲ್ಲಿಗೆ IAS, IPS ಅಧಿಕಾರಿಗಳಾಗಲು ಬರುತ್ತಾರೆ. ಆದರೆ ಅಧಿಕಾರಿ ಆಗುವುದು ಮುಖ್ಯವಲ್ಲ ಅದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ’ ಎಂದು ಗೈಡ್ ಒಬ್ಬರು ತರಗತಿಯಲ್ಲಿ ವಿವರಿಸುವುದು ಕಂಡು ಬರುತ್ತದೆ. 20 ಲಕ್ಷಕ್ಕೂ ಹೆಚ್ಚು ಹಿಂದಿ ಮಾಧ್ಯಮ ವಿದ್ಯಾರ್ಥಿಗಳು ಪ್ರತಿ ವರ್ಷ ಇಲ್ಲಿಗೆ ಕೋಚಿಂಗ್‌ ಪಡೆಯಲು ಬರುತ್ತಾರೆ. ಆದರೆ ಕೇವಲ 25ರಿಂದ 30 ಜನ ಮಾತ್ರ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಿದ್ದಾರೆ ಎನ್ನುವ ವಾಯ್ಸ್‌ ಒವರ್‌ ಕೇಳಿಸುತ್ತದೆ. UPSCಗಾಗಿ ‍ಶ್ರಮ ಪಡುವ ವಿದ್ಯಾರ್ಥಿಗಳ ಜೀವನ, ಅವರು ಕೋಚಿಂಗ್‌ ಪಡೆಯಲು ಹಾಕುವ ಶ್ರಮ, ಪರೀಕ್ಷೆಗಳು, ಫಲಿತಾಂಶ ಈ ರೀತಿಯ ಅಂಶಗಳನ್ನು ಟ್ರೈಲರ್‌ ಒಳಗೊಂಡಿದೆ. ವಿಕ್ರಾಂತ್ ಮಾಸ್ಸೆ, ಪಾಲಕ್ ಲಾಲ್ವಾನಿ, ಹರೀಶ್ ಖನ್ನಾ, ಸುಕುಮಾರ್ ತುಡು, ಸಂಜಯ್ ಬಿಷ್ಣೋಯ್ ಮತ್ತು ಸೂರಜ್ ನಾಗರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಅಕ್ಟೋಬರ್‌ 27ರಂದು ಮೂಲ ಹಿಂದಿ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here