ಅರಮನೆ ನಗರಿ ಮೈಸೂರಿನಲ್ಲಿ ಅದಿತಿ ಪ್ರಭುದೇವ ಮತ್ತು ಪವನ್ ತೇಜ್ ಜೋಡಿಯ ನೂತನ ಸಿನಿಮಾ ಸೆಟ್ಟೇರಿದೆ. ಜೀವಾ ನಿರ್ದೇಶನದ ಸಸ್ಪೆನ್ಸ್‌ – ಥ್ರಿಲ್ಲರ್ ಚಿತ್ರದಲ್ಲಿ ಅದಿತಿ ಇನ್ವೆಸ್ಟಿಗೇ‍ಷನ್ ಅಧಿಕಾರಿಯಾಗಿ ಅಭಿನಯಿಸುತ್ತಿದ್ದಾರೆ.

“ನಿರ್ದೇಶಕ ಜೀವ ಅವರು ಹೇಳಿದ ಕಥೆ ಇಷ್ಟವಾಯಿತು. ಒಂದೇ ಹಂತದಲ್ಲಿ ಚಿತ್ರೀಕರಣ ಇಂಥದ್ದೊಂದು ಪಾತ್ರದಲ್ಲಿ ಅಭಿನಯಿಸಬೇಕೆಂದು ತುಂಬಾ ದಿನಗಳಿಂದ ಆಸೆ ಪಟ್ಟಿದ್ದೆ. ಈ ಸಿನಿಮಾ ಮೂಲಕ ನನ್ನ ಅಭಿಲಾಷೆ ಈಡೇರುತ್ತಿದೆ. ಪಾತ್ರಕ್ಕಾಗಿ ಸೂಕ್ತ ತಯಾರಿಯೊಂದಿಗೇ ಶೂಟಿಂಗ್‌ಗೆ ಹಾಜರಾಗಲಿದ್ದೇನೆ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿ ನನ್ನದು” ಎನ್ನುತ್ತಾರೆ ನಟಿ ಅದಿತಿ ಪ್ರಭುದೇವ. ಪ್ರಸ್ತುತ ಅವರೀಗ ಕನ್ನಡದಲ್ಲಿ ಬೇಡಿಕೆಯ ಹಿರೋಯಿನ್‌. ಕೋವಿಡ್ ನಂತರದ ದಿನಗಳಲ್ಲಿ ತಮ್ಮ ದೊಡ್ಡ ಚಿತ್ರವೊಂದು ಸೆಟ್ಟೇರುತ್ತಿರುವ ಖುಷಿಯಲ್ಲಿದ್ದಾರವರು. ಚಿತ್ರದ ಶೀರ್ಷಿಕೆಯಿನ್ನೂ ಫೈನಲ್ ಆಗಿಲ್ಲ. ಶೀರ್ಷಿಕೆ ಏನಿರಬಹುದು ಎನ್ನುವ ಬಗ್ಗೆ ಅವರಿಗೂ ಕುತೂಹಲವಿದೆ.

ಉದ್ಯಮಿ ವಿ.ಚಂದ್ರು ನಿರ್ಮಾಣದ ಚಿತ್ರಕ್ಕೆ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅವರು ಕ್ಯಾಮೆರಾ ಚಾಲನೆ ಮಾಡಿದರು. “ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ. ಅದಿತಿ ಪ್ರಭುದೇವ ಇನ್ವೆಸ್ಟಿಗೇಷನ್‌ ಆಫಿಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕ ಪವನ್ ತೇಜ್ ಕೂಡ ವಿಭಿನ್ನ ಪಾತ್ರದಲ್ಲಿರುತ್ತಾರೆ. ಮೇಘಶ್ರೀ, ನಾಗಾರ್ಜುನ, ಹನುಮಂತೇಗೌಡ, ರಂಜಿತ್, ನವೀನ್ ಪಡೀಲ್ ಹಾಗೂ ಸಾಕಷ್ಟು ಕಿರುತೆರೆ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಲವತ್ತೈದು ದಿನಗಳ ಒಂದೇ ಹಂತದ ಚಿತ್ರೀಕರಣ ಮೈಸೂರು, ರಾಜಸ್ಥಾನ್ ಮುಂತಾದ ಕಡೆ ನಡೆಯಲಿದೆ. ನಾಲ್ಕು ಹಾಡುಗಳಿದ್ದು, ಪ್ರವೀಣ್ ಸಂಗೀತ ನೀಡಲಿದ್ದಾರೆ” ಎಂದು ನಿರ್ದೇಶಕ ಜೀವಾ ತಮ್ಮ ಸಿನಿಮಾ ಬಗ್ಗೆ ಮಾಹಿತಿ ನೀಡಿದರು.

ಅದಿತಿ ಪ್ರಭುದೇವ ಅವರಿಗೆ ಪವನ್ ತೇಜ್ ಹೀರೋ. “ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ. ನಿರ್ದೇಶಕ ಜೀವಾ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಮೊದಲ ನಿರ್ಮಾಣದ ಚಿತ್ರವಾದರೂ, ಯಾವುದಕ್ಕೂ ಕಡಿಮೆ ಇಲ್ಲದ ಹಾಗೆ ನಿರ್ಮಾಪಕರು ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದತಿ ಪ್ರಭುದೇವ ಅವರಂತಹ ನಟಿಯೊಂದಿಗೆ ಅಭಿನಯಿಸುತ್ತಿರುವುದು ಸಂತಸ ತಂದಿದೆ” ಎನ್ನುವುದು ಹೀರೋ ಪವನ್ ತೇಜ್‌ ಅವರ ಮಾತು. ಕೇಶವನ್ ಸಂಕಲನ, ಸಂತು –  ಮದನ್ ಹರಿಣಿ ನೃತ್ಯ ನಿರ್ದೇಶನ,  ಸಾಯಿಸತೀಶ್ ಛಾಯಾಗ್ರಹಣ, ಮಾಸ್ ಮಾದ ಮತ್ತು ವಿಕ್ರಮ್ ಮೋರ್ ಸಾಹಸ ನಿರ್ದೇಶನ ಚಿತ್ರಿಕ್ಕಿದೆ.

LEAVE A REPLY

Connect with

Please enter your comment!
Please enter your name here