ನಟ ಅಲ್ಲು ಅರ್ಜುನ್‌ ತಮ್ಮ ಮುದ್ದುಮಗಳು ಆರ್ಹಾಳ 5ನೇ ವರ್ಷದ ಹುಟ್ಟುಹಬ್ಬವನ್ನು ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್‌ ಖಲೀಫಾದಲ್ಲಿ ಆಚರಿಸಿದ್ದಾರೆ. ಕಟ್ಟಡದ ಖಾಸಗಿ ಫ್ಲೋರ್‌ವೊಂದರಲ್ಲಿ ಪಾರ್ಟಿ ಆಚರಣೆ ನಡೆದಿದ್ದು, ಇದು ಬುರ್ಜ್ ಖಲೀಫಾ ಮೇಲೆ ನಡೆದ ಮೊದಲ ಬರ್ತ್‌ಡೇ ಪಾರ್ಟಿ ಎನ್ನಲಾಗಿದೆ.

ಜಗತ್ತಿನ ಅತೀ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾದಲ್ಲಿ ಅಲ್ಲು ಅರ್ಜುನ್ ಪುತ್ರಿ ಆರ್ಹಾಳ ಬರ್ತ್‌ ಡೇ ಪಾರ್ಟಿ ನಡೆದಿದೆ.  ಕಟ್ಟಡದ ಖಾಸಗಿ ಮಹಡಿಯೊಂದರಲ್ಲಿ ಪಾರ್ಟಿ ಆಯೋಜಿಸಿದ್ದು, ಕೋವಿಡ್‌ ಕಾರಣದಿಂದಾಗಿ ಅಲ್ಲಿ ಸಾರ್ವಜನಿಕರಿಗೆ ಪ್ರವೇಶವಿದ್ದಿಲ್ಲ. ಅಲ್ಲು ಅರ್ಜುನ್‌ರ ಪತ್ನಿ ಸ್ನೇಹಾ, ಮಗ ಆಯಾನ್‌ ಮತ್ತಿತರ ಕುಟುಂಬದ ಆಪ್ತರು ಮಾತ್ರ ಇದ್ದರು. ಬುರ್ಜ್‌ ಖಲೀಫಾದಲ್ಲಿ ಖಾಸಗಿ ಮಹಡಿಯೊಂದರಲ್ಲಿ ನಡೆದ ಇದು ಅಲ್ಲಿನ ಮೊದಲ ಬರ್ತ್‌ಡೇ ಪಾರ್ಟಿ ಎನ್ನಲಾಗಿದೆ. ಇಲ್ಲಿಯವರೆಗೆ ಬುರ್ಜ್‌ ಖಲೀಫಾದಲ್ಲಿ ಹೀಗೆ ಖಾಸಗಿಯಾಗಿ ಯಾವುದೇ ಬರ್ತ್‌ ಡೇ ಸಂಭ್ರಮಗಳು ಆಗಿರುವ ಉದಾಹರಣೆಗಳಿಲ್ಲ. ಆದರೆ ಬುರ್ಜ್‌ ಖಲೀಫಾ ತೆಲುಗಿನ ಸ್ಟಾರ್‌ ನಟ ಅಲ್ಲು ಅರ್ಜುನ್‌ರಿಗೆ ಈ ಅವಕಾಶ ಮಾಡಿಕೊಟ್ಟಿರುವುದು ವಿಶೇಷ. ಇದಕ್ಕೆ ಅಲ್ಲು ಅರ್ಜುನ್‌ ಧನ್ಯವಾದ ತಿಳಿಸಿದ್ದಾರೆ.

ಮುದ್ದುಮಗಳ ಹುಟ್ಟುಹಬ್ಬದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲು ಅರ್ಜುನ್‌ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಇದಕ್ಕೂ ಮುಂಚೆ ಅಲ್ಲು ಅರ್ಜುನ್‌ ಮಗಳು ಆರ್ಹಾಳ ಅನೇಕ ಫೋಟೋ, ವೀಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದರು. ಆಗ ಫ್ಯಾನ್ಸ್‌ ಮತ್ತು ಸಿನಿಮಾ ಮಂದಿ ಲೈಕ್ಸ್‌ – ಕಮೆಂಟ್ಸ್‌ ಮಾಡುತ್ತಿದ್ದರು. ಈಗಲೂ ಬೇಬಿ ಆರ್ಹಾಳಿಗೆ ಹುಟ್ಟುಹಬ್ಬದ ಶುಭಾಶಯ ಸಂದೇಶಗಳು ಹರಿದುಬರುತ್ತಿವೆ.

LEAVE A REPLY

Connect with

Please enter your comment!
Please enter your name here