ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯ ‘ರಾಧೆ ಶ್ಯಾಮ್‌’ ತೆಲುಗು, ಹಿಂದಿ ದ್ವಿಭಾಷಾ ಸಿನಿಮಾದ ‘ಆಶಿಕಿ ಆ ಗಯೀ’ ಸಾಂಗ್ ಟೀಸರ್ ಬಿಡುಗಡೆಯಾಗಿದೆ. ಮಿಥುನ್ ಗೀತೆ ಬರೆದು ಸಂಗೀತ ಸಂಯೋಜಿಸಿದ್ದು, ಅರಿಜಿತ್ ಸಿಂಗ್ ಹಾಡಿದ್ದಾರೆ.

ರಾಧಾಕೃಷ್ಣ ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‘ರಾಧೆ ಶ್ಯಾಮ್‌’ ಸಿನಿಮಾದ ‘ಆಶಿಕಿ ಆ ಗಯೀ’ ಸಾಂಗ್ ಟೀಸರ್ ಬಿಡುಗಡೆಯಾಗಿದೆ. ಈ ಕ್ಲಾಸಿಕ್ ರೊಮ್ಯಾಂಟಿಕ್‌ ಟ್ರ್ಯಾಕ್‌ ಆಕರ್ಷಕ ಲೊಕೇಲ್‌ ಮತ್ತು ಉತ್ತಮ ಛಾಯಾಗ್ರಹಣದಿಂದಾಗಿ ತಾಜಾ ಅನುಭವ ಕೊಡುತ್ತದೆ. ಪ್ರಭಾಸ್ ಮತ್ತು ಪೂಜಾ ಮಧ್ಯೆಯ ಕೆಮಿಸ್ಟ್ರಿ ಸೊಗಸಾಗಿದೆ. ಮಿಥುನ್ ಈ ಗೀತೆ ರಚಿಸಿ ಸಂಗೀತ ಸಂಯೋಜಿಸಿದ್ದು, ಅರಿಜಿತ್ ಸಿಂಗ್ ಜೊತೆ ಅವರೂ ಹಾಡಿದ್ದಾರೆ. ‘ಜಿಲ್‌’ ಸಿನಿಮಾ ಖ್ಯಾತಿಯ ರಾಧಾಕೃಷ್ಣ ಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್‌’ ಚಿತ್ರದೊಂದಿಗೆ ವರ್ಷಗಳ ನಂತರ ಪ್ರಭಾಶ್ ರೊಮ್ಯಾಂಟಿಕ್ ಹೀರೋ ಆಗಿ ತೆರೆಗೆ ಮರಳುತ್ತಿದ್ದಾರೆ. ಸಚಿನ್‌ ಖೇಡೇಕರ್‌, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಮುರಳಿ ಶರ್ಮ, ಕುನಾಲ್ ರಾಯ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎಪ್ಪತ್ತರ ದಶಕದ ಕಾಲಘಟ್ಟದ ಹಿನ್ನೆಲೆಯಲ್ಲಿ ಕತೆ ನಿರೂಪಣೆಗೊಳ್ಳಲಿದೆ. 2002ರ ಜನವರಿ 14ರಂದು ಸಕ್ರಾಂತಿಗೆ ಸಿನಿಮಾ ತೆರೆಗೆ ತರುವುದು ನಿರ್ಮಾಪಕರ ಯೋಜನೆ.

Previous articleಅಂಗೈಯಲ್ಲಿ ಮಾಯಾಬಜಾರ್
Next articleಕಮರ್ಷಿಯಲ್ ಎಂಟರ್‌ಟೇನರ್ ಟೈಂ ಲೂಪ್ ಸಿನಿಮಾ; ಗೆಲುವಿನ ಹಾದಿಗೆ ಸಿಂಬು, ವೆಂಕಟ್‌ ಪ್ರಭು

LEAVE A REPLY

Connect with



Please enter your comment!
Please enter your name here