ರಜನೀಕಾಂತ್‌ ಅಭಿನಯದ ಬಹುನಿರೀಕ್ಷಿತ ‘ಜೈಲರ್‌’ ಸಿನಿಮಾ ನಾಳೆ (ಆಗಸ್ಟ್‌ 10) ತೆರೆಕಾಣುತ್ತಿದೆ. ಚಿತ್ರ ಭಾರಿ ಕ್ರೇಝ್‌ ಸೃಷ್ಟಿಸಿದ್ದು ಚೆನ್ನೈ, ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ನಗರಗಳ ಕೆಲವು ಖಾಸಗಿ ಕಂಪನಿಗಳು ರಜೆ ಘೋಷಿಸಿವೆ!

ರಜನಿಕಾಂತ್‌ ಅಭಿನಯದ ‘ಜೈಲರ್‌’ ಸಿನಿಮಾ ಭರ್ಜರಿ ಕ್ರೇಝ್‌ ಸೃಷ್ಟಿಸಿದೆ. ನಾಳೆ ಆಗಸ್ಟ್‌ 10ರಂದು ಸಿನಿಮಾ ತೆರೆಕಾಣುತ್ತಿದೆ. ನಾಳೆ ಸಿನಿಮಾ ರಿಲೀಸ್‌ ದಿನದಂದು ಬೆಂಗಳೂರು, ಚೆನ್ನೈ ಸೇರಿದಂತೆ ಕೆಲವು ನಗರಗಳ ಖಾಸಗಿ ಕಂಪನಿಗಳು ರಜೆ ಘೋಷಿಸಿವೆ! ನಟ ಧನುಷ್‌ ಅವರು ತಾವೊಬ್ಬ ರಜನೀಕಾಂತ್‌ ಅಭಿಮಾನಿಯಾಗಿ, ‘Its Jailer Week!’ ಎಂದು ಟ್ವೀಟ್‌ ಮಾಡಿದ್ದಾರೆ. ರಜನೀಕಾಂತ್‌ ಅವರಿಗೆ ಚಿಕ್ಕ ಮಕ್ಕಳಿಂದ ಹಿರಿಯರಾದಿಯಾಗಿ ದೊಡ್ಡ ಅಭಿಮಾನಿ ಬಳಗವಿದೆ. ಅವರ ಪ್ರತೀ ಸಿನಿಮಾ ರಿಲೀಸ್‌ಗೆ ಮುನ್ನ ಹಬ್ಬದ ವಾತಾವರಣ ಏರ್ಪಡುತ್ತದೆ. ‘ಜೈಲರ್‌’ ಚಿತ್ರದ ವಿಶೇಷ ಪಾತ್ರದಲ್ಲಿ ಕನ್ನಡ ನಟ ಶಿವರಾಜಕುಮಾರ್‌ ನಟಿಸಿದ್ದು, ಇಲ್ಲಿ ಶಿವರಾಜಕುಮಾರ್‌ ಅಭಿಮಾನಿಗಳಲ್ಲೂ ಸಿನಿಮಾ ಕುರಿತಂತೆ ನಿರೀಕ್ಷೆ ಹೆಚ್ಚಿದೆ.

ಹಿಮಾಲಯಕ್ಕೆ ಹೊರಟ ರಜನಿ | ‘ಜೈಲರ್‌’ ನಾಳೆ ತೆರೆಕಾಣುತ್ತಿದ್ದು ನಟ ರಜನೀಕಾಂತ್‌ ಇಂದು ಹಿಮಾಲಯದತ್ತ ಪ್ರವಾಸ ಬೆಳೆಸಿದ್ದಾರೆ. ಸಾಮಾನ್ಯವಾಗಿ ತಮ್ಮ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ರಜನೀಕಾಂತ್‌ ಪ್ರವಾಸ ಕೈಗೊಳ್ಳುವುದು ವಾಡಿಕೆ. ಅದರಲ್ಲೂ ಅವರು ಹೆಚ್ಚಾಗಿ ಹಿಮಾಲಯಕ್ಕೆ ತೆರಳುತ್ತಾರೆ. ಕೋವಿಡ್‌ನಿಂದಾಗಿ ಕಳೆದ ನಾಲ್ಕು ವರ್ಷ ಅವರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪ್ರವಾಸ ಕೈಗೊಂಡಿದ್ದಾರೆ. ‘ಅನ್ನಾಥೆ’ ತೆರೆಕಂಡ ಎರಡು ವರ್ಷಗಳ ನಂತರ ‘ಜೈಲರ್‌’ ತೆರೆಕಾಣುತ್ತಿದೆ. ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಮೋಹನ್‌ ಲಾಲ್‌, ತಮನ್ನಾ, ಸುನೀಲ್‌, ರಮ್ಯಕೃಷ್ಣ ನಟಿಸಿದ್ದಾರೆ. ಅನಿರುದ್ಧ ರವಿಚಂದ್ರನ್‌ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Previous article‘Spider Man – Across the Spider Verse’ | ZEE5ನಲ್ಲಿ ಲಭ್ಯವಿದೆ ಸೂಪರ್‌ ಹೀರೋ ಸಿನಿಮಾ
Next articleನೆಗೆಟೀವ್‌ ಶೇಡ್‌ನಲ್ಲಿ ಮಮ್ಮೂಟಿ | ಅರ್ಜುನ್ ಅಶೋಕನ್ ಹಾರರ್ ಥ್ರಿಲ್ಲರ್ ಸಿನಿಮಾ

LEAVE A REPLY

Connect with

Please enter your comment!
Please enter your name here