ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ ನಾಯಕ್’ ತೆಲುಗು ಸಿನಿಮಾದ ಲಿರಿಕಲ್ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಯಶಸ್ವೀ ಮಲಯಾಳಂ ಸಿನಿಮಾ ‘ಅಯ್ಯಪ್ಪನಮ್ ಕೊಶಿಯಮ್‌’ ತೆಲುಗು ಅವತರಣಿಕೆ ಇದು. 2022ರ ಜನವರಿ 12ರಂದು ಸಿನಿಮಾ ತೆರೆಕಾಣಲಿದೆ.

ಪವನ್ ಕಲ್ಯಾಣ್‌ ಅಭಿನಯದ ‘ಭೀಮ್ಲಾ ನಾಯಕ್‌’ ತೆಲುಗು ಸಿನಿಮಾ ಸುದ್ದಿ ಮಾಡುತ್ತಿದೆ. ಚಿತ್ರಕ್ಕೆ ಸಂಭಾಷಣೆ ಮತ್ತು ಹಾಡು ಬರೆಯುತ್ತಿರುವ ತ್ರಿವಿಕ್ರಮ್‌ ಬರ್ತ್‌ಡೇ ನಿಮಿತ್ತ ನಿನ್ನೆ ಶೀರ್ಷಿಕೆ ಗೀತೆಯ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿದೆ ಚಿತ್ರತಂಡ. ಆರಂಭದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುವ ಪವನ್ ಕಲ್ಯಾಣ್ ನಂತರ ಲುಂಗಿ ಮತ್ತು ಷರ್ಟ್‌ನ ಮಾಸ್ ಅವತಾರದಲ್ಲಿ ಗೋಚರಿಸುತ್ತಾರೆ. ಸಾಹಿತ್ಯ, ಸಂಗೀತಕ್ಕೆ ಹೊಂದುವಂತಹ ಆಕ್ಷನ್ ಸನ್ನಿವೇಶಗಳಿದ್ದು, ಹೀರೋ ಪವನ್ ಕಲ್ಯಾಣ್‌ ಇಂಟ್ರಡಕ್ಷನ್‌ಗೆ ಹೇಳಿಮಾಡಿಸಿದಂತಿದೆ ಸಾಂಗ್‌. ತ್ರಿವಿಕ್ರಮ್ ರಚಿಸಿರುವ ಹಾಡಿಗೆ ಅರುಣ್ ಕೌಂಡಿನ್ಯ ದನಿಯಾಗಿದ್ದಾರೆ. ರಾಣಾ ದಗ್ಗುಬಾಟಿ ಮತ್ತು ನಿತ್ಯಾ ಮೆನನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಲಯಾಳಂ ಸೂಪರ್ ಹಿಟ್‌ ಸಿನಿಮಾ ‘ಅಯ್ಯಪ್ಪನಮ್ ಕೊಶಿಯಮ್‌’ ತೆಲುಗು ರೀಮೇಕ್‌ ‘ಭೀಮ್ಲಾ ನಾಯಕ್‌’. ಮೂಲ ಮಲಯಾಳಂ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್‌ ಮತ್ತು ಬಿಜು ಮೆನನ್ ನಟಿಸಿದ್ದರು. ಸಾಗರ್ ಕೆ. ಚಂದ್ರು ನಿರ್ದೇಶಿಸುತ್ತಿರುವ ‘ಭೀಮ್ಲಾ ನಾಯಕ್‌’ 2022ರ ಜನವರಿ 12ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here