ಮನು‌ ರವಿಚಂದ್ರನ್ ನಾಯಕನಾಗಿ ನಟಿಸಿರುವ ‘ಮುಗಿಲ್ ಪೇಟೆ’ ಚಿತ್ರದ ವಿಡಿಯೋ ಸಾಂಗ್ ನಾಡಹಬ್ಬ ದಸರಾದ ಮೊದಲ ದಿನ (ಅಕ್ಟೋಬರ್ 7)  ಬಿಡುಗಡೆಯಾಗಲಿದೆ. ನಿರ್ದೇಶಕ ಭರತ್ ಬರೆದಿರುವ ಈ ಹಾಡಿನಲ್ಲಿ ಮನು ಹಾಗೂ ಕಯಾದು ಲೋಹರ್ ನಟಿಸಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ನಕುಲ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು ನಾಡಹಬ್ಬದ ಸಂಭ್ರಮಕ್ಕಾಗಿ ಚಿತ್ರಪ್ರೇಮಿಗಳಿಗೆ ಚಿತ್ರತಂಡದ ಉಡುಗೊರೆ.

ಬೆಳಕಿನ ಹಬ್ಬ ದೀಪಾವಳಿಗೆ ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಟ್ರೇಲರ್‌ಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ಸಿಕ್ಕಿದ್ದು, ಚಿತ್ರಕ್ಕೂ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ದೊರಕುವ ವಿಶ್ವಾಸ ಚಿತ್ರತಂಡದ್ದು.  ಮನು ಅವರಿಗೆ ನಾಯಕಿಯಾಗಿ  ಕಯಾದು ಲೋಹರ್ ನಟಿಸಿದ್ದಾರೆ. ರಿಷಿ, ಅವಿನಾಶ್, ತಾರಾ ಅನುರಾಧ, ಸಾಧುಕೋಕಿಲ, ರಂಗಾಯಣ ರಘು ಹೀಗೆ ಹೆಸರಾಂತ ಕಲಾವಿದರು ‘ಮುಗಿಲ್ ಪೇಟೆ’ಯಲ್ಲಿ ಅಭಿನಯಿಸಿದ್ದಾರೆ.

ಭರತ್ ಎಸ್. ನಾವುಂದ ರಚನೆ ಹಾಗೂ ನಿರ್ದೇಶನದ ಈ ಚಿತ್ರವನ್ನು ಮೋತಿ ಮೂವೀ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿದ್ದಾರೆ. ರವಿವರ್ಮ (ಗಂಗು) ಅವರ ಛಾಯಾಗ್ರಹಣ ‘ಮುಗಿಲ್ ಪೇಟೆ’ಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.‌ ಅರ್ಜುನ್ ಕಿಟ್ಟು ಸಂಕಲನ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಬಿಡುಗಡೆ ಆಗಲಿರುವ ‘ಮುಗಿಲ್ ಪೇಟೆ’ಯ ಈ ಹಾಡಿನ ಸಣ್ಣ ಝಲಕ್ ಈಗ ನಿಮ್ಮ ಮುಂದಿದೆ.

Previous articleOTT ಪ್ರಪಂಚದಲ್ಲಿ ‘ರತ್ನ’; ರೋಹಿತ್ ನಿರ್ದೇಶನದ ರತ್ನದ ಪದಕ
Next articleಯೇ ‘ಕ್ಯಾಬ್’ ಬಾತ್ ಹೈ; ಎಸಿ ಜಾಸ್ತಿ ಮಾಡದ್ದಕ್ಕೆ ಸಂಜನಾ ತಲೆಬಿಸಿ!

LEAVE A REPLY

Connect withPlease enter your comment!
Please enter your name here