‘ಬಾಹುಬಲಿ’ ಖ್ಯಾತಿಯ ರಾಜಮೌಳಿ ನಿರ್ದೇಶನದ ‘RRR’ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 2022ರ ಜನವರಿ 7ರಂದು ಸಿನಿಪ್ರಿಯರು ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

ಎಸ್.ಎಸ್.ರಾಜಮೌಳಿ ಅವರ ಬಹುನಿರೀಕ್ಷಿತ ‘RRR’ ನಿರ್ಮಾಪಕರು ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್‌ ಅಭಿನಯದ ಚಿತ್ರವು ಜನವರಿ 07, 2022ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಿಗೆ ಬರಲಿದೆ. ದೇಶದಲ್ಲಿ ಚಿತ್ರಮಂದಿರಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸದ ಕಾರಣ ಈ ಬಹುನಿರೀಕ್ಷಿತ ಚಿತ್ರದ ಬಿಡುಗಡೆ ದಿನಾಂಕ ವಿಳಂಬವಾಯಿತು. ಈ ಹಿಂದೆ, ಚಿತ್ರವು ಅಕ್ಟೋಬರ್ 13ರಂದು ತೆರೆಗೆ ಬರಬೇಕಿತ್ತು. ಇತ್ತೀಚೆಗಷ್ಟೇ ಥಿಯೇಟರ್‌ಗಳು ಮತ್ತೆ ತೆರೆಯುವ ಘೋಷಣೆಯೊಂದಿಗೆ, ನಿರ್ಮಾಪಕರು ಬಿಡುಗಡೆ ದಿನಾಂಕವನ್ನು ಸ್ವಲ್ಪ ಮುಂದೂಡಲು ನಿರ್ಧರಿಸಿದ್ದಾರೆ.

ರಾಮ್ ಚರಣ್ ತೇಜಾ ಮತ್ತು ಜೂನಿಯರ್ ಎನ್‌ಟಿಆರ್‌ ಹೊರತುಪಡಿಸಿ, ಈ ಚಿತ್ರದಲ್ಲಿ ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯಾ ಮೋರಿಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ಸಮುದ್ರಕಣಿ, ರೇ ಸ್ಟೀವನ್ಸನ್ ಮತ್ತು ಅಲಿಸನ್ ಡೂಡಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ, ಜೂನಿಯರ್ ಎನ್‌ಟಿಆರ್‌ ಕೋಮಾರಂ ಭೀಮ್ ಆಧಾರಿತ ಬುಡಕಟ್ಟು ಮನುಷ್ಯನ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಮ್ ಚರಣ್ ಅಲ್ಲೂರಿ ಸೀತಾರಾಮರಾಜು ಅವರನ್ನು ಆಧರಿಸಿದ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಆಲಿಯಾ ಭಟ್‌ಗೆ ರಾಮ್ ಚರಣ್ ಪತ್ನಿ ಸೀತಾ ಪಾತ್ರವಿದೆ.

LEAVE A REPLY

Connect with

Please enter your comment!
Please enter your name here