ವಿಶ್ವಕ್ ಖಂಡೇರಾವ್ ನಿರ್ದೇಶನದ ‘ಸ್ಕೈಲ್ಯಾಬ್‌’ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಬಹುಭಾಷಾ ನಟಿ ನಿತ್ಯಾ ಮೆನನ್ ನಟಿಸಿರುವ ಸೈಂಟಿಫಿಕ್ ಫಿಕ್ಷನ್‌ ಪೀರಿಯಡ್ ಡ್ರಾಮಾ ಇದು. ರೆಟ್ರೋ ಕಾಸ್ಟ್ಯೂಮ್, ಮ್ಯೂಸಿಕ್‌ನೊಂದಿಗೆ ಟ್ರೈಲರ್ ಗಮನಸೆಳೆಯುತ್ತದೆ.

ತೆಲುಗು ಚಿತ್ರರಂಗದಲ್ಲೀಗ ಅಪರೂಪದ ಕತೆಗಳು ಸಿನಿಮಾಗಳಾಗುತ್ತಿವೆ. ಪ್ರೇಕ್ಷಕರು ಕೂಡ ಅಂತಹ ಸಿನಿಮಾಗಳನ್ನು ವೀಕ್ಷಿಸುತ್ತಿದ್ದು, ಇದು ಹೊಸ ತಲೆಮಾರಿನ ನಿರ್ದೇಶಕರ ಆಸಕ್ತಿಯನ್ನು ಹೆಚ್ಚಿಸಿದೆ. ಅವರು ಅಸಾಂಪ್ರದಾಯಿಕ ಮತ್ತು ಭಿನ್ನ ಕತೆಗಳನ್ನು ತೆರೆಗೆ ಅಳವಡಿಸುತ್ತಿದ್ದಾರೆ. ಈ ಪಟ್ಟಿಗೆ ಸೇರ್ಪಡೆಗೊಳಿಸಬಹುದಾದ ಸಿನಿಮಾ ‘ಸ್ಕೈಲ್ಯಾಬ್‌’. ನಿತ್ಯ ಮೆನನ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಚಿತ್ರದ ನಿರ್ಮಾಣದಲ್ಲೂ ಅವರು ಕೈಜೋಡಿಸಿರುವುದು ವಿಶೇಷ. ಸೈಂಟಿಫಿಕ್‌ ಫಿಕ್ಷನ್ ಪೀರಿಯಡ್ ಡ್ರಾಮಾ ಜಾನರ್‌ನ ಈ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಸತ್ಯದೇವ್ ಮತ್ತು ರಾಹುಲ್ ರಾಮಕೃಷ್ಣ ನಟಿಸಿದ್ದಾರೆ. ಕೆಲವೇ ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಫಸ್ಟ್‌ ಲುಕ್‌ ಗಮನ ಸೆಳೆದಿತ್ತು. ತೆಲಂಗಾಣದ ಬಂಡಲಿಂಗಂಪಳ್ಳಿ ಗ್ರಾಮದಲ್ಲಿ ನಡೆಯುವ ಎಪ್ಪತ್ತರ ದಶಕದ ಕತೆಯಿದು.

ವಿಶ್ವಕ್‌ ಖಂಡೇರಾವ್ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ತನಿಕೆಲ್ಲ ಭರಣಿ, ತುಳಸಿ, ವಿಷ್ಣು ನಟಿಸಿದ್ದಾರೆ. ಪ್ರಶಾಂತ್ ಆರ್. ವಿಹಾರಿ ಸಂಗೀತ ಸಂಯೋಜಿಸಿದ್ದು, ಬೈಟ್ ಫೀಚರ್ಸ್‌ ಬ್ಯಾನರ್‌ನಡಿ ಸಿನಿಮಾ ತಯಾರಾಗುತ್ತಿದೆ. ನಾಯಕನಟಿ ನಿತ್ಯಾ ಮೆನನ್ ಸಹನಿರ್ಮಾಣ ಚಿತ್ರಕ್ಕಿದೆ. ‘ಭೀಮ್ಲಾ ನಾಯಕ್‌’ ಚಿತ್ರದಲ್ಲಿ ನಿತ್ಯಾ ಮೆನನ್ ಅವರು ಪವನ್ ಕಲ್ಯಾಣ್ ಜೊತೆ ನಟಿಸುತ್ತಿದ್ದಾರೆ. ನಟ ಸತ್ಯದೇವ್‌ ಸಾಲು, ಸಾಲು ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದು ‘ರಾಮ್‌ ಸೇತು’ ಚಿತ್ರದೊಂದಿಗೆ ಬಾಲಿವುಡ್‌ ಪ್ರವೇಶಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here