ಜಟ್ಲಾ ಸಿದ್ಧಾರ್ಥ್‌ ನಿರ್ದೇಶನದ ‘ಇನ್ ಬೆಲ್ಲಿ ಆಫ್ ಎ ಟೈಗರ್’ ಹಿಂದಿ ಸಿನಿಮಾ ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್‌ ಆಗಲಿದೆ. ತಮ್ಮ ಕುಟುಂಬದ ಆರ್ಥಿಕ ಭದ್ರತೆಗಾಗಿ ದಂಪತಿಗಳು ಎದುರಿಸುವ ಸವಾಲುಗಳು ಚಿತ್ರದ ಕಥಾವಸ್ತು.

ಛಾಯಾಗ್ರಾಹಕ ಜಟ್ಲಾ ಸಿದ್ಧಾರ್ಥ್‌ ನಿರ್ದೇಶಿಸಿರುವ ‘ಇನ್ ಬೆಲ್ಲಿ ಆಫ್ ಎ ಟೈಗರ್’ ಹಿಂದಿ ಸಿನಿಮಾ ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್‌ ಆಗಲಿದೆ. ಈ ಚಲನಚಿತ್ರವು ನೈಜ ಘಟನೆಗಳ ಕುರಿತು ಹೇಳಲಿದೆ. ಚಿತ್ರದಲ್ಲಿ ತಮ್ಮ ಕುಟುಂಬದ ಆರ್ಥಿಕ ಭದ್ರತೆಗಾಗಿ ದಂಪತಿಗಳು ಎದುರಿಸುವ ತೊಂದರೆಗಳನ್ನು ತೋರಿಸಲಾಗಿದೆ. ಭಾಗೋಲೆ ಮತ್ತು ಪ್ರಭಾತ ಎಂಬ ಭೂ-ರಹಿತ ಇಬ್ಬರು ರೈತರು ನಗರದಲ್ಲಿ ಕೆಲಸ ಸಿಗದೆ ತಮ್ಮ ಹಳ್ಳಿಗಳಿಗೆ ಮರಳುತ್ತಾರೆ. ಅದರಲ್ಲಿ ಒಬ್ಬ ರೈತ ಹುಲಿಯಿಂದ ಕೊಲ್ಲಲ್ಪಡುತ್ತಾನೆ. ಇವರೆಲ್ಲಾ ತಮ್ಮ ಭೂಮಿಯನ್ನು ಕಳೆದುಕೊಂಡು, ಇಟ್ಟಿಗೆ ಕಾರ್ಖಾನೆಯಲ್ಲಿ ಗುಲಾಮನಾಗಿ ಕೆಲಸ ಮಾಡುವ ಮಗನ ವೇತನದಿಂದ ಕುಟುಂಬ ನಡೆಸುತ್ತಿರುತ್ತಾರೆ.

ಸಿದ್ಧಾರ್ಥ್‌ ಮತ್ತು ಅಮಂಡಾ ಮೂನಿ ರಚಿಸಿರುವ ಈ ಚಿತ್ರಕ್ಕೆ ‘ಇನ್ ದಿ ಮೂಡ್ ಫಾರ್ ಲವ್’ ಖ್ಯಾತಿಯ ಶಿಗೇರು ಉಮೆಬಯಾಶಿ ಸಂಗೀತ ಸಂಯೋಜಿಸಿದ್ದಾರೆ. ಆಸ್ಕರ್ ಪುರಸ್ಕೃತ ರಸೂಲ್‌ ಪೂಕುಟ್ಟಿ ಅವರ ಧ್ವನಿ ವಿನ್ಯಾಸವಿದೆ. ಚೀನಾದ ಸಾಹಸ ನಿರ್ದೇಶಕ Wuershan ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಚಲನಚಿತ್ರವನ್ನು Bhairavi Films (US), Wonder Pictures (China) ಮತ್ತು Jeevi Films (India)ದ ಸಹಯೋಗದಲ್ಲಿ Qun Films (Indonesia), Flash Forward Entertainment (Taiwan) ಮತ್ತು Myth Image (Mainland China) ಬ್ಯಾನರ್‌ ಅಡಿಯಲ್ಲಿ ನಿರ್ಮಿಸಲಾಗಿದೆ.

LEAVE A REPLY

Connect with

Please enter your comment!
Please enter your name here